ಶಂಕರಲಿಂಗ ಭಗವಾನರ ಉಪನಯನದಲ್ಲಿ ಅನುಗ್ರಹ

 

ಶಂಕರಲಿಂಗ ಭಗವಾನರ ಉಪನಯನದಲ್ಲಿ ಅನುಗ್ರಹ 

ಎಂಟನೇ ವರ್ಷದಲ್ಲಿ ರಂಗನಾಥನಿಗೆ ಉಪನಯನ ಅಣಜಿ ಗ್ರಾಮದಲ್ಲಿ. ಅಲ್ಲಿ ಯಲ್ಲಪ್ಪಜ್ಜನೆಂಬ ಸಾಧುಗಳಿದ್ದರು. ಅವರು ನೋಡುವುದಕ್ಕೆ ಮಂಕರಂತೆ, ಮೂಢರಂತೆ, ಹುಚ್ಚು ಹಿಡಿದವರಂತೆ ಕಂಡರೂ ಎಂಥಹ ವಿದ್ವಾಂಸರನ್ನೂ ವಾದದಲ್ಲಿ ಜಯಿಸುವ ಪ್ರೌಢಿಮೆ ಇದ್ದಿತು. ಅವರಿಗೆ  ಅವರ ಗುರುಗಳಾದ ಬ್ರಹ್ಮಾನಂದರು ತುಂಬಿಗೆರೆ ಮೊದಲೇ ಹೀಗೆ ಹೇಳಿದ್ದರು. “ನಿಮ್ಮ ಬಂಧುವರ್ಗದಲ್ಲಿ ಒಬ್ಬ ಮಹಾಪುರುಷನು ಜನಿಸುತ್ತಾನೆ. ಅವನು ಸಹಜ ಸಿದ್ಧ, ಅವತಾರ ಪುರುಷ. ಅವನ ಉಪನಯನವು ಅಣಜಿಯಲ್ಲಿ ನಡೆಯುತ್ತದೆ. ಅವನಾರೆಂದು ನಮ್ಮಿಂದ ನಿಮಗೆ ತಿಳಿಯುತ್ತದೆ. ಆಗ ಅವನಿಗೆ ನೀವು ಮಹಾವಾಕ್ಯಗಳನ್ನು ಉಪದೇಶಿಸಿ ಅರ್ಥ ವಿವರಣೆ ಮಾಡಬೇಕು.” ಯಲ್ಲಪ್ಪನವರು ರಂಗನಾಥನಿಗೆ ಉಪನಯನವಾದ ಮೇಲೆ ಮಹಾವಾಕ್ಯಗಳನ್ನು ಉಪದೇಶಿಸಿದರು. ಅಷ್ಟೆ ಅಲ್ಲದೆ ರಂಗನಾಥನಿಗೆ ಗುರುಸೇವೆ, ಗುರು ಮಹಿಮೆಗಳನ್ನು ಬೊಧಿಸಿ ಅವನ ಹೃದಯದಲ್ಲಿ ವಿವೇಕ, ವಿಚಾರ, ಶ್ರದ್ಧೆಗಳು ಮೂಡುವಂತೆ ಮಾಡಿದರು.

ಶ್ರೀ ಶಂಕರಲಿಂಗ ಗುರುಕಥಾಮೃತ ದಿಂದ (ಅ ರಾ ಸೆ )

Comments

Popular posts from this blog

ಪ್ರಾರ್ಥನೆ